ಕಮಲ ನಾರಾಯಣ ದೇವಸ್ಥಾನವು ಭಾರತದ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ದೇಗಾಂವ್‌ನಲ್ಲಿದೆ. ಈ ದೇವಾಲಯವನ್ನು ಕದಂಬ ರಾಜವಂಶದವರು ನಿರ್ಮಿಸಿದರು. ಕಮಲ ನಾರಾಯಣ ದೇವಾಲಯವನ್ನು ೧೨ ನೇ ಶತಮಾನದ ಕದಂಬ ರಾಜ ಶಿವಚಿತ್ತ ಪೆರ್ಮಾಡಿಯ ರಾಣಿ ಕಮಲಾ ದೇವಿಯ ಮುಖ್ಯ ವಾಸ್ತುಶಿಲ್ಪಿ ತಿಪ್ಪೋಜ ನಿರ್ಮಿಸಿದರು. ಈ ದೇವಾಲಯವನ್ನು ಕ್ರಿ.ಶ ೧೧೭೪ ರಲ್ಲಿ ನಿರ್ಮಿಸಲಾಗಿದೆ. ಇಲ್ಲಿನ ಪ್ರಧಾನ ದೇವರು ನಾರಾಯಣ. == ವಾಸ್ತುಶಿಲ್ಪ == ಇದು ಸಿಂಹಗಳು ಮತ್ತು ಹೂವಿನ ಶಿಲ್ಪಗಳನ್ನು ಒಳಗೊಂಡಿದೆ. ದೇವಾಲಯವು ಮೂರು ಕೋಶಗಳನ್ನು ಹೊಂದಿದೆ. ಆದ್ದರಿಂದ ತ್ರಿಕೂಟಾಚಲ ದೇವಾಲಯಗಳ ವರ್ಗೀಕರಣದ ಅಡಿಯಲ್ಲಿ ಬರುತ್ತದೆ. ಇಲ್ಲಿ ಮೂರು ದೇಗುಲಗಳಿವೆ. ಮೊದಲ ದೇಗುಲವು ನಾರಾಯಣನ ಪ್ರತಿಮೆಯನ್ನು ಹೊಂದಿದೆ. ಎರಡನೆಯದು ಲಕ್ಷ್ಮಿ ನಾರಾಯಣನ ಪ್ರತಿಮೆಯನ್ನು ಹೊಂದಿದ್ದು, ಲಕ್ಷ್ಮಿ ದೇವಿಯು ನಾರಾಯಣನ ಮಡಿಲಿನಲ್ಲಿ ಕುಳಿತಿದ್ದಾಳೆ. ಮೂರನೆಯ ದೇಗುಲವು ರಾಣಿ ಕಮಲಾ ದೇವಿಯ ಪ್ರತಿಮೆಯನ್ನು ಹೊಂದಿದ್ದು, ಅವಳ ಪರಿಚಾರಕರು ಎರಡೂ ಬದಿಗಳಲ್ಲಿದ್ದಾರೆ. ದೇವಾಲಯದ ಒಳ ಛಾವಣಿಯು ತಲೆಕೆಳಗಾದ ರೂಪದಲ್ಲಿ ಸೊಗಸಾದ ಕೆತ್ತನೆಯ ದೈತ್ಯಾಕಾರದ ಕಮಲವನ್ನು ಹೊಂದಿದೆ. ದೇವಾಲಯದ ಮೇಲ್ಛಾವಣಿಯು ಶ್ರೀಮಂತ ಕೆತ್ತನೆಗಳೊಂದಿಗೆ ಕಂಬಗಳ ಆಧಾರದ ಮೇಲೆ ನಿಂತಿದೆ. ಅವುಗಳ ನಡುವೆ ಘರ್ಜಿಸುವ ಸಿಂಹಗಳನ್ನು ಹೊಂದಿರುವ ಕಂಬಗಳು, ಈ ಕಂಬಗಳನ್ನು ಸುತ್ತುವರೆದಿರುವ ಪಿರಮಿಡ್ ಗೋಪುರಗಳು ಮತ್ತು ಅವುಗಳ ನಡುವೆ ಶಿಲಾಬಾಲಕೆಯರು ಮತ್ತು ಸುಂದರವಾದ ಸುರುಳಿ-ವಿನ್ಯಾಸಗಳಿವೆ. ದೇವಾಲಯದ ಮುಂಭಾಗದ ಉದ್ದಕ್ಕೂ ಕಲ್ಲಿನ ಫಲಕಗಳು ಕದಂಬ ರಾಜವಂಶದ ಮತ್ತು ಇತರ ವ್ಯಕ್ತಿಗಳ ಲಾಂಛನಗಳನ್ನು ಹೊಂದಿವೆ. == ಉಲ್ಲೇಖಗಳು ==